Powered By Blogger

Wednesday, June 3, 2015

ಸುಮ್ ಸುಮ್ನೆ ಗಲಾಟೆ ಮಾಡ್ತಾರೆ,ಏನು ಲಾಭವೋ...?!

ಮೊದಲೇ ಹೇಳಿಬಿಡುತ್ತೇನೆ ನಾನು ದೊಡ್ಡ ‪#‎ModiFan‬ ಅಲ್ಲ. ಅವರ ವರ್ಣರಂಜಿತ ವಸ್ತ್ರಗಳಾಗಲೀ, ವೈಭವೋಪೇತ ವಿದೇಶ ಪ್ರವಾಸವಾಗಲಿ, ಅದಮ್ಯ ಭಾಷಣಗಳಾಗಲೀ, ಕ್ಷಮಿಸಿ , ನನ್ನನ್ನು ಅಷ್ಟು ರಂಜಿಸಲಾರವು. ಆದರೆ ಯುಪಿಎ ಸಾಯಿಸಿ ಹೋದ ಆಶಾಭಾವವನ್ನು ಕಂಬ ಕೊಟ್ಟು ನಿಲ್ಲಿಸಿ ನಮ್ಮಲ್ಲೊಂದು ಜಂಬ ಸೃಷ್ಟಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಕಂಠಮಟ್ಟ ಹಗರಣಗಳನ್ನೇ ತುಂಬಿಕೊಂಡಿದ್ದ ಸರ್ಕಾರವನ್ನು ನೋಡಿ ಬೇಸತ್ತಿದ್ದ ಭಾರತೀಯರಲ್ಲಿ “ಸರ್ಕಾರ ಅಂದ್ರೆ ಹಂಗಲ್ರಪ್ಪಾ..” ಅಂತ ತಿಳುವಳಿಕೆ ಮೂಡಿಸಿದ್ದಾರೆ. ಇವರಿಂದ ಸಾಧ್ಯವಾಗಬಹುದು ಎಂಬ ಆಶಾಭಾವ ಮೂಡಿಸಿದ್ದಾರೆ. ವೆಲ್, ಆದರೆ ವರ್ಷ ಪೂರೈಸಿದ ಈ ಸನ್ನಿವೇಷದಲ್ಲಿ ಕೆಲವು ತೀರಾ ಪೂರ್ವಗ್ರಹ ಪೀಡಿತ ಮನುಷ್ಯರಿಂದ ವಿಚಿತ್ರತಮ ಟೀಕೆಗೊಳಗಾಗುತ್ತಿದ್ದಾರೆ. “ಬಿಜೆಪಿ ಆಡಳಿತಕ್ಕೆ ಬಂದಿರುವುದರಿಂದ ಏನೋ ಅನಾಹುತ ಸಂಭವಿಸಿಯಾಗಿದೆ…” ಅಂತ ಕೆಲವರು ಬರೆಯುತ್ತಿದ್ದಾರೆ. ಬರ್ಕೊಳ್ಳಲಿ ಬಿಡಿ, ಆದರೆ ಅದನ್ನು'ದಿ ಹಿಂದು' ದಂತಹ ಪತ್ರಿಕೆಗಳು ಪ್ರಕಟಿಸುತ್ತಿವೆ!! ಮೋದಿಯನ್ನು ಹೆಜ್ಜೆ ಹೆಜ್ಜೆಗೂ ಹೊಗಳುವ ಅನೇಕ ನೆಟ್ಟಿಗರ ಬಗ್ಗೆ ನಮಗೆಲ್ಲ ಖಂಡಿತ ಬೇಸರವಿದೆ. ಮೋದಿಯನ್ನು ಬರೀ ಹೊಗಳಬೇಕೆಂದಲ್ಲ. ಆದರೆ ಟೀಕಿಸುವಲ್ಲಿ ತಾರ್ಕಿಕತೆಯಿರಬೇಕು. ಅದು ಯಾರೇ ಇರಬಹುದು. ಮೋಹನ್ ಭಾಗ್ವತ್ ಮದರ್ ತೆರೇಸಾರನ್ನು ಟೀಕಿಸಿದಾಗಲೂ ನಮಗೆ ಬೇಸರವಾಗಿದೆ. ಅದ್ಯಾರೋ ಮಣಿಶಂಕರ್ ಅಯ್ಯರ್ ಎಂಬ ಮಂತ್ರಿ 'ಮಹೋದಯ' ವೀರಸಾವರ್ಕರ್ ಬಗ್ಗೆ ಹಲುಬಿದಾಗಲೂ ನಮಗೆ ಅತೀವ ಹಿಂಸೆಯಾಗಿದೆ. ಕೆಲವರಿಗೆ ತಾವು ಹೇಳಿದ್ದನ್ನೆಲ್ಲ ಜನ ಕಣ್ಣುಮುಚ್ಚಿ ನಂಬಿಬಿಡುತ್ತಾರೆಂಬ 'ಅದ್ಭುತ' ಭ್ರಮೆ! ಬಿಡಿ 'ದಿ ಹಿಂದು' ಒಂಥರ ಹಾಗೇ. ಅಫ್ಜಲ್ ಗುರುನನ್ನು ನೇಣಿಗೆ ಹಾಕಿದಾಗ Vengeance (ಹಿಂಸೆ) Is Not Justice ಎಂದು ಸಂಪಾದಕೀಯ ಬರೆದ ಪತ್ರಿಕೆ ಅಂದರೆ ಕೇಳಬೇಕೆ? ಅದ್ಯಾರೋ ಮಂಜರಿ ಕಾಟ್ಜು ಎಂಬುವವರು ಒಂದು ‘ ಅಮೋಘ’ ಲೇಖನ ಬರೆದಿದ್ದಾರೆ. ಇವರೆಲ್ಲ ಯಾಕಿಷ್ಟು ಸಂಕುಚಿತವಾಗಿ, ಒಂದೇ ಧಾಟಿಯಲ್ಲಿ ಯೋಚಿಸುತ್ತಾರೆ, ಅದರಿಂದ ಅವರಿಗೇನು ಲಾಭ ಅಂತ ನಂಗಂತೂ ಗೊತ್ತಿಲ್ಲ. ಲೇಖನಕ್ಕೆ ಲಗತ್ತಿಸಿದ ವ್ಯಂಗ್ಯಚಿತ್ರವನ್ನೊಮ್ಮೆ ನೋಡಿ. “ಕೆಲವು ಧಾರ್ಮಿಕ ಕೇಂದ್ರಗಳ ಮೇಲೆ RSS ಸಣ್ಣಮಟ್ಟದ ದಾಳಿ ಮಾಡಿಸುತ್ತಿದೆ, ಅದರ ಮೇಲೆ ಮೋದಿ ತಮ್ಮ ಆಡಳಿತ ನಡೆಸುತ್ತಿದ್ದಾರೆ” ಎಂದು ಸಾರುವ ‘ಅದ್ಭುತ’ ಚಿತ್ರ. ಸರಿ, ಈ ಸಣ್ಣಮಟ್ಟದ ದಾಳಿಗಳಂತೆ ದೊಡ್ಡಮಟ್ಟದ ಉಗ್ರ ಚಟುವಟಿಕೆಗಳು ಅಪಾಯಕಾರಿಯಲ್ಲವೇನು? ಅವುಗಳ ಬಗ್ಗೆ ಇವರೆಲ್ಲ ಗಪ್ ಚುಪ್. ” Not a sprinkle, But a spread of saffron” ಅಂತೆ! ಹಿಂದು ಧರ್ಮದ ಬಗ್ಗೆ ಭಾರತದಲ್ಲಿ ಮಾತನಾಡದೆ ಮತ್ತೇನು ಸೈಬೀರಿಯಾದಲ್ಲಿ ಮಾತನಾಡಬೇಕಂತಾ? ಹೆಡ್ಡಿಂಗ್ ನಲ್ಲೇ ಇವರ 'ಸಿಕ್'ಯುಲಾರಿಸಮ್ ಗೊತ್ತಾಗಿಬಿಡುತ್ತೆ! ಆಹಾ, ಮೋದಿ ಸರ್ಕಾರ್ ಒಂದು ನಿಧಾನವಾದ ಆದರೆ ಖಂಡಿತ ಅಪಾಯಕಾರಿಯಾದ ಷಡ್ಯಂತರ ಅಳವಡಿಸಿಕೊಂಡಾಗಿದೆಯಂತೆ, ಅನಾಹುತವೊಂದೇ ಬಾಕಿಯಂತೆ! ನೋಡಿ..ನೀವೇ ಓದಿ..Link ಅನ್ನು ಕೆಳಗೆ ಕೊಟ್ಟಿದ್ದೇನೆ. “ಹೇಗೆ ಭಾರತ ಧರ್ಮ ಅಸಹಿಷ್ಣುವಾಗುತ್ತಿದೆ, ಮೋದಿ ಹೇಗೆ ಅಸಹಾಯಕರಾಗುತ್ತಿದ್ದಾರೆ, ಎಂಥಾ ಘೋರ ಅಪಾಯ ಕಾದಿದೆ” ಅನ್ನುವುದನ್ನೆಲ್ಲ, ಪಾಪ, ಲೇಖಕರು ಕಾಳಜಿಯಿಂದ ವಿವರಿಸಿದ್ದಾರೆ. ವೇಸ್ಟ್ ಆಗಬಾರದು ಅಲ್ಲವಾ? ಮತ್ತೆ ಓದಿ, ಕಮೆಂಟ್ ಮಾಡಿ. ಕಮೆಂಟ್ ಗಳು ಸಭ್ಯವಾಗಿರಲಿ.
http://www.thehindu.com/opinion/op-ed/all-those-who-want-to-eat-beef-can-go-to-pakistan-mukhtar-abbas-naqvi/article7244981.ece

Friday, April 10, 2015

ತಪ್ಪು ನಿಜವಾಗಿಯೂ ಲಖ್ವಿಯದ್ದಲ್ಲ!!!

      ಛೇ..ಛೇ.. ಪಾಕಿಸ್ತಾನದ ಕೋರ್ಟ್ ಗಳು ಹೇಳಿದ್ದರಲ್ಲಿ ತಪ್ಪೇನಿದೆ? ತಪ್ಪು ನಿಜವಾಗಿಯೂ  ಲಖ್ವಿದ್ದಲ್ಲ! ಹಫೀಜ್ ಸಯೀದ್ ನದ್ದೂ ಅಲ್ಲ!!
       26/11 ಅಲ್ಲಿ ಅತಿದೊಡ್ಡ ತಪ್ಪು ಮಾಡಿದ್ದು ಸಂದೀಪ್ ಉನ್ನಿಕೃಷ್ನನ್! ಎರಡನೆಯ ತಪ್ಪು ಮಾಡಿದ್ದು ಒಬ್ಬ ಸಾಮಾನ್ಯ ಪೋಲೀಸ್ ! ಒಂದೇಸಮನೆ ಎಕೆ-47ರಲ್ಲಿ ಗುಂಡು ಹೊಡೆಯುತ್ತಿದ್ದರೂ ಕದಲದೆ ಆತನನ್ನು ಬಿಗಿದಪ್ಪಿ ಹಿಡಿದು ಈ ದೇಶಕ್ಕೆ ಉಗ್ರನೊಬ್ಬನನ್ನು ಜೀವಂತ ಹಿಡಿದು ಕೊಟ್ಟನಲ್ಲ, ಹಾಗೆ ಮಾಡಿ, ತಾನು ಕೈಯಲ್ಲಿ ಕೇವಲ ಲಾಟಿ ಹಿಡಿದಿದ್ದರೂ ಕಸಬ್ ನನ್ನು ಬಿಗಿದಪ್ಪಿ, ಹಾಗೇ ಪ್ರಾಣಬಿಟ್ಟನಲ್ಲ ಆ ಸಬ್ ಇನ್ಸ್ಪೆಕ್ಟರ್ ತುಕಾರಾಮ್ ಒಂಬ್ಳೆ? ಆತ! ನಂತರದ ತಪ್ಪಿತಸ್ತರು ಆ ಕಾರ್ಯಾಚರಣೆಯಲ್ಲಿ ಕೊನೆಯುಸಿರೆಳೆದ ಉಳಿದ ಸೇನಾನಿಗಳು! ಹೌದು, ಆಶ್ಚರ್ಯವಾಗುತ್ತ? ತಾನು ಯಾವ ದೇಶಕ್ಕಾಗಿ ಪ್ರಾಣ ಬಿಟ್ಟನೋ ಅದೇ ದೇಶದ ಆಡಳಿತ ತನ್ನನ್ನು ದಾರುಣವಾಗಿ ಕೊಂದ ಪಾಕಿಸ್ತಾನಕ್ಕೆ ಮಸ್ಕಾ ಹೊಡೆಯುತ್ತೋ, ಪದೇ ಪದೇ ಕದನವಿರಾಮ ಉಲ್ಲಂಘಿಸಿ ಕೊನೆಗೆ ಸೈನಿಕರಿಬ್ಬರ ತಲೆ ಕಡಿದುಕೊಂದುಹೋದರೂ ಕೈಲಾಗದವರಂತೆ ಸುಮ್ಮನಿರುತ್ತೋ, ಆ ಪಾಕಿಸ್ತಾನದ ಪ್ರಧಾನಿಯನ್ನು ಬಾ ಬಾ ಅನ್ನುತ್ತೋ, 'ಪಾಕಿಸ್ತಾನದೊಂದಿಗಿನ ಶಾಂತಿ ಮಾತುಕತೆ' ಎಂಬ ಶುಧ್ಧ ನಾನ್ ಸೆನ್ಸ್ ಕಾನ್ಸೆಪ್ಟ್ ಅಡಿಯಲ್ಲಿ ತನ್ನೆಲ್ಲ ಹೇಡಿತನವನ್ನು ಸಮರ್ಥಿಸಿಕೊಳ್ಳುತ್ತೋ, ಆ ದೇಶಕ್ಕಾಗಿ ಸಂದೀಪ್ ಯಾಕೆ ತನ್ನ ತಂದೆತಾಯಿಯವರನ್ನು ಒಬ್ಬಂಟಿ ಮಾಡಿ ಹೋಗಬೇಕಿತ್ತು? ತುಕಾರಾಮ್ ಒಂಬ್ಳೆಯ ಹೆಸರು ನಮ್ಮ ದೇಶದ ಅನೇಕರಿಗೆ ಖಂಡಿತವಾಗಿಯೂ ಗೊತ್ತಿಲ್ಲ! ಹಾಗಂತ ಸಚಿನ್ ನ ಮಗನ ಹೆಸರು ಸಹಿತ ಗೊತ್ತಿರುತ್ತೆ! ಶಾರೂಕ್ ನ ಇಷ್ಟದ ರೆಸಪಿ, ದೀಪಿಕಾಳ ಮುಂದಿನ ಚಿತ್ರ, ಸಲ್ಮಾನ್ ನ ಅದಕ್ಕೂ ಮುಂದಿನ ಚಿತ್ರ ಇವೆಲ್ಲ ಗೊತ್ತಿರುತ್ತೆ! ಯವ್ಯಾವಾಗೋ ಒಂದುಸಲ ರೊಚ್ಚಿಗೆದ್ದು ಸೈನಿಕ ಪ್ರೀತಿ, ದೇಶಪ್ರೀತಿ ನೆನಪಾಗಿ ಮುಂದಿನ ಕ್ಷಣವೇ ಮರೆತು ಬಿಡುವ ಸ್ವಾರ್ಥಿ, ಕೃತಘ್ನ ಸಮಾಜಕ್ಕೆ ಆತ  ಯಾಕಾಗಿ ಮಾಡುತ್ತಿದ್ದ ಊಟವನ್ನು ಅರ್ಧಕ್ಕೆ ನಿಲ್ಲಿಸಿ ಬಂದು ಕಸಬ್ ನನ್ನು ಬಿಗಿದಪ್ಪಿ ಹಿಡಿದನೋ? ರಾಮನಂತೆ ಗುರಿಯಿಡುತ್ತಿದ್ದ ಬಂಗಾರದಂಥ Encounter Specialist ವಿಜಯ ಸಾಲಸ್ಕರ್ ಯಾಕೆ ಸಿಡಿಯುತ್ತಿದ್ದ ಗುಂಡು-ಗ್ರೇನೇಡ್ ಗಳಿಗೆ ಎದೆ ಕೊಟ್ಟೆನೋ....?

Friday, November 29, 2013

ವೆಲ್ ಡನ್  ವಾಮನ....!

    ಬದಲಾವಣೆ ಜಗದ ನಿಯಮ. ಹೌದು, ಎಲ್ಲರೂ ಒಪ್ಪಿಕೊಳ್ಳಲೇಬೇಕು. ಜೀವನವೇ ಒಪ್ಪಿಸುತ್ತದೆ ಕೂಡ. ಬದಲಾವಣೆ ಸಕಾರಾತ್ಮಕವಾಗಿರಲಿ, ನಕಾರತ್ಮಕವಾಗಿರಲಿ ಹಳೆಯ ನೆನಪು ಕಾಡದಿರದು. ಮೊನ್ನೆ ಕ್ರಿಕೆಟ್ ಪ್ರಿಯರಲ್ಲಾದದ್ದೂ ಅದೇ! ಸಚಿನ್ ಇನ್ನು ರಿಟೈರ್ಮೆಂಟ್ ಕೊಡಲಿ ಎಂದು ಕೂಗುತ್ತಿದ್ದವರ ಗಂಟಲೂ ಗದ್ಗದಿತ! "ಛೇ..ಸಚಿನ್ ಇಲ್ಲದ ಕ್ರಿಕೆಟ್ ನೆನೆಯುವುದು ಹೇಗೆ?" ಎಂಬ ಉದ್ಗಾರ! Tears...
    ಸಚಿನ್ ತಮ್ಮ ವೃತ್ತಿಜೀವನದಲ್ಲಿ 34,357 ರನ್ನುಗಳನ್ನು ಹೊಡೆದಿದ್ದರಿಂದಾಗಲೀ, ನೂರು ನೂರುಗಳನ್ನು ಸಿಡಿಸಿದ್ದರಿಂದಾಗಲೀ ಸಾಮಾನ್ಯನಿಗೆ ಸ್ವಲ್ಪವೂ ಪ್ರಯೋಜನವಿಲ್ಲ. ಯಾರಿಲ್ಲ ಎಂದರು? ಅವರಿಗೆ ಸಾವಿರ ಸನ್ಮಾನಗಳು ಕಿಕ್ಕಿರಿದು ಬಂದಿರುವುದರಿಂದ ಸಾಮಾನ್ಯನ ಜೀವನದಲ್ಲಿ ಏನೇನು ಬದಲಾಗುವುದಿಲ್ಲ. ಆದರೆ ಸಚಿನ್ ಎಂದರೆ right from the President,  ಟ್ರಾಫಿಕ್ನಲ್ಲಿ ಬೇಡುವ ಭಿಕ್ಷುಕನವರೆಗೂ ಒಂದು obession! ಸಚಿನ್ ಬಗ್ಗೆ ಅಗೌರವ ಇರುವ ಎಷ್ಟು ಜನ ಬುಧ್ಧಿಜೀವಿಗಳು, ವಿಜ್ನಾನಿಗಳು, ರಾಜಕಾರಣಿಗಳು ಸಿಕ್ಕಾರು? "ಈಗೆನ್ರಪಾ...ನಮ್ ಸಚಿನ್ನಂಗೆ ಭಾರತರತ್ನ ಕೊಡ್ತೀರೋ, ಇಲ್ಲೋ..ಅಷ್ಟೆ" ಎಂದು ತನಗೆ ಕವಡೆಕಾಸೂ ಪ್ರಯೋಜನವಿಲ್ಲದ ಸಾಮಾನ್ಯನೊಬ್ಬ ಸರ್ಕಾರಕ್ಕೆ ಧಮಕಿ ಹಾಕುತ್ತಾನೆ, ಯಾಕೆ? "ಜನ ಮಳ್ಳೊ, ಜಾತ್ರೆ ಮಳ್ಳೊ?" ಎಂದು ನಸುನಕ್ಕಿ ಸುಮ್ಮನಿರಬಹುದಾದರೂ, ಜನ ಸುಮ್ಮನೆ ದಾರಿಹೋಕನಿಗೆ ಮಳ್ಳಾಗುತ್ತರ? ಹೋಗಲಿ, ಸಚಿನ್ ನಿವೃತ್ತಿಯ ಮರುಕ್ಷಣ ಟ್ವಿಟ್ಟರ್ ನಲ್ಲಿ ರೋಜರ್ ಫೆಡರರ್, ಅಮಿತಾಬ್, ಧನರಾಜ್ ಪಿಳ್ಳೈ, ಬ್ರೆಟ್ ಲೀಯಂಥವರೆಲ್ಲ ಕಂಬನಿಗೈಯುತ್ತಾರಲ್ಲ, ಅವರೂ ಮಳ್ಳಾ...?    ಒಂದು ವ್ಯಕ್ತಿತ್ವಕ್ಕೆ ಜನ ಅದ್ಯಾಕೆ ಆ ಪರಿ ಮಾರುಹೋಗುತ್ತಾರೆ? ನಟನೊಬ್ಬನ/ನಟಿಯೊಬ್ಬಳ ಹುಚ್ಚು ಸಿನೆಮಾಗಳಿಗೆ ಮಾರುಹೋಗುವುದಕ್ಕೂ, ಸಚಿನ್ ನಂತಹ ಅದ್ಭುತ ಆಟಗಾರನಿಗೆ ಮಾರುಹೋಗುವುದಕ್ಕೂ ವ್ಯತ್ಯಾಸವಿಲ್ಲವಾ? ಸಚಿನ್ ರ ವಿಷಯದಲ್ಲಿ ಜನರು ಫಿದಾ ಆಗಿದ್ದು ಅವರ ಸಾಮರ್ಥ್ಯಕ್ಕೆ, that Capacity! 200 ಟೆಸ್ಟ್ ಪಂದ್ಯಗಳು ಸೇರಿದಂತೆ ಅಂತರಾಷ್ಟ್ರೀಯ ಪಂದ್ಯಗಳೇ ೬೬೪ ಅಂದರೆ...ಅದೇನು ದೇಹವೋ, ಎಂಥದದು! Fantabulous! 41ರ ವಯಸ್ಸಿನಲ್ಲಿದ್ದು ಒಂದು ಟೆಸ್ಟ್ ಪಂದ್ಯ ಆಡುವುದು, ಅದರಲ್ಲಿ 74 ಓಟಗಳಿಸುವುದು ಅಂದರೆ, "ಇವ 100 ಹೊಡ್ದೇ ಇಲ್ಲ" ಎಂದು ಮೂಗುಮುರಿದಷ್ಟು ಸುಲಭವಲ್ಲ. "ಅವರ ಬಳಿ ಅಷ್ಟು ವಯಸ್ಸಿನವರೆಗೆ ಆಡಲು ಯಾರೂ ಹೇಳಿರಲಿಲ್ಲ, ಮೊದಲೇ ರಿಟೈರ್ ಆಗಬಹುದಿತ್ತು ಎಂದು ಹೇಳುವವರಿದ್ದಾರೆ. ಸ್ವಾಮಿ, ಥೇನ್ ಸಿಂಗ್ ಸೌಲಭ್ಯಗಳಿಲ್ಲದ ಕಾಲದಲ್ಲಿ ಎವರೆಸ್ಟ್ ಹತ್ತಿದರು ಎಂದರೆ, "ಅವರೇನು ಅಷ್ಟು ಕಷ್ಟ ಪಡಬೇಕಿರಲಿಲ್ಲ, ಅವರನ್ನು ಯರೂ ಹತ್ತಲು ಹೇಳಿರಲಿಲ್ಲ" ಅಂದಂಗಾಯ್ತು..!    Controversially Yours ನಲ್ಲಿ ಅಖ್ತರ್, ಸಚಿನ್ ರನ್ನು ನಿಂದಿಸಿದ್ದಕ್ಕೆ ಕ್ರಿಕೆಟ್ ಸಮೂಹವೇ ಆತನ ಮೇಲೆ ಎಗರಿಬಿದ್ದಿತ್ತಲ್ಲ, ಇನ್ನೇನು ಬೇಕು ಒಬ್ಬ ಆಟಗಾರನಿಗೆ? ಸಚಿನ್ ಬ್ಯಾಟ್ ಮಾಡುವಾಗ ಅಖ್ತರ್ ಕಾಲು ನಡುಗುತ್ತಿತ್ತು ಎಂದು ಆತನದೇ ದೇಶದ ಆಫ್ರಿದಿ ಹೇಳಿದಾಗ, ನೋಡಬೇಕಿತ್ತು ಅಖ್ತರ್ ಮುಖವ...ಸಾಮರ್ಥ್ಯ ಅಂದರೆ ಅದು! ಝಗಮಗಿಸುವ T-20ಗಳ ಕಾಲದಲ್ಲಿ ಟೆಸ್ಟ್ ಪಂದ್ಯವೊಂದರ ಟಿಕೆಟ್ ಮಾರಾಟದಲ್ಲಿ ಜನನಿಯಂತ್ರಣ ಕೈಮೀರಿ ಹೋಗಿ, ಲಾಠಿಚಾರ್ಜ್ ನಡೆಯಿತು ಅಂದರೆ!? ಟೆಸ್ಟ್ ಪಂದ್ಯವೊಂದರ ಟಿಕೆಟ್ ಮಾರಹೋದರೆ BCCI ವೆಬ್ ಸೈಟ್ ಡೌನ್ ಆಗಿತ್ತು! OMG ಹೇಗೆ ನಂಬುತ್ತೀರಿ? ರಾಷ್ಟ್ರಮಟ್ಟದ ರಾಜಕೀಯ ವ್ಯಕ್ತಿಗಳು ಬಂದು ಪಂದ್ಯನೋಡುತ್ತಾರೆ ಎಂದರೆ, it implies ಅದು ವಿಶ್ವಕಪ್ ಫೈನಲ್ ಆಗಿರಬೇಕು, ಅಥವಾ ಒಲಂಪಿಕ್ಸ್ ನದೋ, ಏಷ್ಯಾಡ್ ನದೋ ಉದ್ಘಾಟನಾ ಪಂದ್ಯವಾಗಿರಬೇಕು. ಆದರೆ ಮೊನ್ನೆ ವಾಂಖೆಡೆಯಲ್ಲಿ ಕಂಡರಲ್ಲ ರಾಹುಲ್ ಗಾಂಧಿ? ಹೃತಿಕ್ ಕೂಡ ಬಂದು ಹೋದರು. ಆಮಿರ್ ಖಾನ್ ಕಣ್ಣುಮಿಟುಕಿಸದೆ ನೋಡುತ್ತಿದ್ದರೂ, ಡಿಜಿಟಲ್ ಪರದೆಯ ಮೇಲೆ ಉದ್ಗಾರ "DONT EVEN BLINK"! T-20ಯ copyright ಘೋಷಣೆಯಂತಿರುವ ಇದನ್ನು ಯಾರಾದರೂ ಟೆಸ್ಟ್ ಪಂದ್ಯವೊಂದಕ್ಕೆ ಹಾಕುತ್ತಾರಾ? ದ್ರಾವಿಡ್, ಗಂಗೂಲಿ, ಲಕ್ಷ್ಮಣ್ ರೂ ಹಾಜರಿದ್ದರು. ಎಲ್ಲವೂ ಒಬ್ಬನಿಗಾಗಿ ಎಂದು ಅಚ್ಚರಿ ಪಡುತ್ತಿರುವಾಗಲೇ ಕೆಳಿಬರುತ್ತದೆ ಕಿವಿಗಡಚುವ ಕೂಗು Sachin...Sachin....   ಯಾರೀತ? ಅದು ಒಂದು ಮು೦ಬೈನ ರಾಜಪುರ ಸಾರಸ್ವತ ಬ್ರಾಹ್ಮಣ ಕುಟುಂಬ. 24 ಏಪ್ರಿಲ್, 1973ರಲ್ಲಿ ಅಲ್ಲಿ ಹುಟ್ಟಿದ ಕೂಸು ಸಚಿನ್. ಸಚಿನ್ ಮೇಲಿನ ಅಭಿಮಾನದಿಂದ ಅನೇಕ ಅಭಿಮಾನಿಗಳು ತಮ್ಮ ಮಕ್ಕಳಿಗೆ ಸಚಿನ್ ಎಂದು ಹೆಸರಿಸಿರುವುದನ್ನು ಸಾಕಷ್ಟು ನೋಡಿದ್ದೇವೆ. ವಿಪರ್ಯಾಸ ಎಂದರೆ, ಸಚಿನ್ ಗೆ ಸಚಿನ್ ಎಂದು ಆತನ ತಂದೆ ನಾಮಕರಣ ಮಾಡಿದ್ದು ಸಚಿನ್ ದೇವ್ ಬರ್ಮನ್ ಎಂಬ ಸಂಗೀತ ನಿರ್ದೇಶಕನ ಮೇಲಿನ ಅಭಿಮಾನದಿಂದ! ಸಚಿನ್ಗೆ ಇಬ್ಬರು ಅಣ್ಣಂದಿರು, ಒಬ್ಬಳು ಅಕ್ಕ.    ಈಗ ಪಕ್ಕಾ Gentleman ಸಚಿನ್, ಚಿಕ್ಕಂದಿನಲ್ಲೂ ಹೀಗೆ ಇದ್ದರು ಅಂದುಕೊಳ್ಳಬೇಡಿ! ಪುಟ್ಟ ಸಚಿನ್ horrible ತುಂಟ! ಶಾಲೆಯಲ್ಲಿ ಜಗಳ ಸಾಮಾನ್ಯ. ಓದಿನಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ಸಚಿನ್ ತುಂಟನಾದದ್ದು ಒಳ್ಳೆಯದೇ ಆಯಿತು! ಇಲ್ಲದಿದ್ದರೆ ಕ್ರಿಕೆಟ್ ನೊಂದಿಗೆ ಸಚಿನ್ ಗೆ ಸಂಬಂಧವಿರುತ್ತಿರಲಿಲ್ಲ. 'ಶತಕಿಲಾಡಿ' ಸಚಿನ್ ನ 'ಖೇಲ್' ಖತಂ ಮಾಡಲು ಆತನ ತಂದೆ ರಮೇಶ್, ರಮಾಕಾಂತ್ ಆಚ್ರೇಕರ್ ಎಂಬ ಕ್ರಿಕೆಟ್ ಕೋಚ್ ಬಳಿ ಕರೆದುಕೊಂಡು ಹೋದದ್ದು, ಇದರಿಂದಲೇ ಸಚಿನ್ 'ಖೇಲ್' ಕಲಿತು 'ಕ್ರಿಕೆಟ್ ಕಿಲಾಡಿ'ಯಾಗಿದ್ದು, ಮುಂದೆ 'ಖೇಲ್ ರತ್ನ' ಪಡೆದಿದ್ದು!! ಕ್ರಿಕೆಟ್ ಅನ್ನು ಶ್ರದ್ಧೆ ಹಾಗೂ ಏಕಗ್ರತೆಯಿಂದ ಬೆನ್ನಟ್ಟಿಹೋದ  ಸಚಿನ್, ಚಿಕ್ಕವನಾಗ್ಯೂ ಮುಂಬೈ ಕ್ರಿಕೆಟ್ ವಲಯದಲ್ಲಿ ಹೆಸರುಗಳಿಸಿದರು.    ಸಚಿನ್ ಫಾಸ್ಟ್ ಬೌಲರ್ ಆಗಿಬಿಡುತ್ತಿದ್ದರೇನೋ..! ಆದರೆ ತರಬೇತಿಯಲ್ಲಿ, ಆಗಿನ ಆಸ್ಟ್ರೇಲಿಯಾ ವೇಗಿ Dennis Lillee ಬ್ಯಾಟಿಂಗ್ ಮುಂದುವರಿಸುವಂತೆ ಸೂಚಿಸಿದ್ದರಿಂದ, ವಿಶ್ವ ಕ್ರಿಕೆಟ್ ನಲ್ಲಿ ಮುಂದೆ ಬ್ಯಾಟಿಂಗ್ ವಿಭಾಗದ ಊಹಿಸಲಸಾಧ್ಯ ದಾಖಲೆಗಳು ಸೃಷ್ಟಿಯಾದವು!    ಆದರೆ ಜನ ಸೀರಿಯಸ್ಸಾಗಿ ನಿಬ್ಬೆರಗಾಗಿದ್ದು, ಕಾಂಬ್ಳಿಯೊಂದಿಗೆ ಸೇರಿ ಸಚಿನ್ 664 ರನ್ನುಗಳ ಅಮೋಘ ಜೊತೆಯಾಟ ಆಡಿದಾಗ.ಎದುರಾಳಿಯ ಒಬ್ಬ ಬೌಲರ್ ಅತ್ತುಬಿಟ್ಟನಂತೆ! ಎದುರಾಳಿಯ ಟೀಮ್ ಆಟ ಮುಂದುವರಿಸುವುದು ಬೇಡ ಎಂದು ತೀರ್ಮಾನಿಸಿತಂತೆ! Turning Pointಗಳ ಲೆಕ್ಕದಲ್ಲಿ ಹೇಳುವುದಾದರೆ ಸಚಿನ್ ಬದುಕಿನಲ್ಲಿ ಇದೂ ಒಂದು.      ಫಸ್ಟ್ ಕ್ಲಾಸ್ ಕ್ರಿಕೆಟ್ ನಲ್ಲಿ ಸಚಿನ್ ರದ್ದು Century Entry! ಆದರೆ ಅ೦ತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಅವರ ಆಗಮನ  ಪ೦ದ್ಯದಲ್ಲಿ ಅವರಿ೦ದ ಹೊರಹೊಮ್ಮಿದ್ದು 15 ದೇ ಓಟಗಳು. ಆ ಪ೦ದ್ಯ ಆಡಬೇಕಾದರೆ (1989) ಸಚಿನ್ 16 ವರ್ಷ 223 ದಿನಗಳ ಹುಡುಗ. ಏಕ ದಿನ ಪ೦ದ್ಯದಲ್ಲಿ ಡಕ್ ಔಟ್! ಕಾಲಿಟ್ಟ ನ೦ತರದ ವರ್ಷದಲ್ಲೇ ಇಗ್ಲೆ೦ಡ್ ವಿರುದ್ಧ ಟೆಸ್ಟ್ ಪ೦ದ್ಯವೊ೦ದರಲ್ಲಿ ಸಚಿನ್ನರಿ೦ದ ಹೊರಬಿದ್ದಿತ್ತು century! 119*.  ಇ೦ಥದ್ದು ನೂರು ಸ೦ಭವಿಸುತ್ತದೆ ಎ೦ದು ಅ೦ದು ಯಾರು ಯೋಚಿಸಿದ್ದರೂ, ಮು೦ದೆ ನೂರು ನೂರುಗಳು ಬ೦ದಿದ್ದು ಮಾತ್ರ ಇತಿಹಾಸ.     ಅದು 1998 ಇರಬೇಕು. ಭಾರತ ಆಸ್ಟ್ರೇಲಿಯಾದ ವಿರುದ್ಧ ಬರೋಬ್ಬರಿ 310 ರನ್  ಪೇರಿಸಿತ್ತು. ಆಸ್ಟ್ರೇಲಿಯನ್ನರಿಗೆ ಬ್ಯಾಟಿ೦ಗ್ ಹೇಳಿಕೊಡಬೇಕೇ? ತಿರುಗಿ ಬಿದ್ದಿತ್ತು ಆಸ್ಟ್ರೇಲಿಯಾ. 203 ರನ್ ಹೊಡೆದು ಕೇವಲ ಮೂರು ವಿಕೆಟ್ ಕಳೆದುಕೊ೦ಡಿತ್ತು. 31 ನೇ ಓವರಿನಲ್ಲಿ ಸಚಿನ್ ಗೆ ಬೌಲಿ೦ಗ್ ಕೊಡಲ್ಪಟ್ಟಿತ್ತು. ಅವರು ಮೂಲತಃ ಒಬ್ಬ ಬ್ಯಾಟ್ಸ್ ಮನ್. ಅವರ ಬೌಲಿ೦ಗ್ ಮೂಲಕ ಗೆಲ್ಲುವುದನ್ನು ಯಾರೂ ನಿರೀಕ್ಷಿಸಿರಲಾರರು. ಆದರೆ ಒಬ್ಬ ತಜ್ನ ಬೌಲರ್ ಕೈಲಾಗದ ಪವಾಡವನ್ನು ಸಚಿನ್ ಅ೦ದು ಮಾಡಿದರು. ಪಟಪಟನೆ ಐದು ವಿಕೆಟ್ ಗಳನ್ನು ಉದುರಿಸಿದರು. ವಿಧಿಯಿಲ್ಲದೇ ಆಸ್ಟ್ರೇಲಿಯನ್ನರು ಸೋಲೊಪ್ಪಿಕೊ೦ಡಿದ್ದರು. 3 ಸತತ ಟೆಸ್ಟ್ ಸೆ೦ಚುರಿಗಳು ಮತ್ತು 2 ಸತತ ODI ಸೆ೦ಚುರಿಗಳು ಅದೇ ವರ್ಷ ಬ೦ದಿದ್ದು ಸಚಿನ್ನರ ಸಾಧನೆ. "ನನಗೆ ಕನಸಿನಲ್ಲಿಯೂ ಸಚಿನ್ನರದ್ದೇ ಭಯ" ಎ೦ದು ಶೇನ್ ವಾರ್ನ್ ಹೇಳಿದ್ದು ತಮಾಷೆ ಎ೦ದುಕೊ೦ಡಿರಾ....?      ನ೦ತರ ಸಚಿನ್ ನಾಯಕರಾಗಿದ್ದು ನಿಜ. ಮುಟ್ಟಿದ್ದೆಲ್ಲ ಚಿನ್ನ ಎ೦ಬ೦ತಿದ್ದ ಸಚಿನ್ನರಿಗೆ ನಾಯಕತ್ವದಲ್ಲಿ ಮಾತ್ರ ಯಸಸ್ಸು ಎ೦ಬ ಚಿನ್ನ ಸಿಗಲೇ ಇಲ್ಲ. ಭಾರತ ಅನೇಕ ಪ೦ದ್ಯಗಳನ್ನು ಸೋತಿತು. ಸಚಿನ್ ತಾವೇ   ನಾಯಕತ್ವಕ್ಕೆ ರಾಜೀನಾಮೆ ನೀಡಿದರು.       ಸಚಿನ್ನರನ್ನು ಜನರು ಕೇವಲ ಅವರ ಆಟಕ್ಕೆ ಮೆಚ್ಚಿದ್ದಲ್ಲ. ಸಚಿನ್ ರದ್ದು ಶಿಸ್ತು ತು೦ಬಿದ ವ್ಯಕ್ತಿತ್ವ. ಮೊನ್ನೆ 'Sachin has never lost his temper on field' ಎ೦ದು ವಿವರಣೆಕಾರ ವಿವರಿಸುತ್ತಿದ್ದಾಗ ಮತ್ತೆ ಮತ್ತೆ ನೆನಪಾದದ್ದು   ಸಚಿನ್ ನಡೆದುಕೊಳ್ಳುತ್ತಿದ್ದ ರೀತಿ. ಮೊನ್ನೆ ಮನೆಗೆ ಹೋಗುವಾಗ ಪಿಚ್ ಗೆ ನಮಸ್ಕರಿಸಿ ಹೋಗಿದ್ದು ತೋರಿಕೆಯ ನಡೆಯಲ್ಲ. ಅವರ ಸಾಧನೆಯಾಗಲಿ, ಒತ್ತಿಕೊ೦ಡು ಬ೦ದ ಹಣವಾಗಲಿ, ಜನ ಅವರ ಮೇಲಿಟ್ಟ ಅಗಾಧ ಅಭಿಮಾನವಾಗಲೀ ಎ೦ದೂ ಸಚಿನ್ ರ ತಲೆ ಕೆಡಿಸಿಲ್ಲ. ಯಶಸ್ಸು ತಲೆಗೆ ಏರಿದ ಉದಾಹರಣೆ ಇಲ್ಲಿ ಕಾಣಲಾರಿರಿ. 'ಭಾರತ ರತ್ನ' ಸಚಿನ್ ರದ್ದು ಹೆಗಲ ಮೇಲೆ ಕೈಯಿರಿಸಿ ಮಾತನಾಡಿಸುವ Down to Earth ವ್ಯಕ್ತಿತ್ವ.  ದ್ರಾವಿಡ್ ನಾಯಕತ್ವಕ್ಕೆ ರಾಜೀನಾಮೆ ಕೊಟ್ಟಾಗ ಖುದ್ದು ಶರದ್ ಪವಾರ್ ತೆ೦ಡುಲ್ಕರ್ ರನ್ನು ನಾಯಕತ್ವ ವಹಿಸಿಕೊಳ್ಳುವ೦ತೆ ಕೋರಿದ್ದರ೦ತೆ. ಉಹೂ೦...! ಸಚಿನ್ ಒಪ್ಪಲಿಲ್ಲ. ಮಹೇ೦ದ್ರಸಿ೦ಗ್ ಧೋನಿಯನ್ನು ನಾಯಕತ್ವಕ್ಕೆ ಸೂಚಿಸಿದ್ದು ಯಾರೆ೦ದುಕೊ೦ಡಿರಿ? ಸಚಿನ್ ಅ೦ದು ಧೋನಿಯವರನ್ನು ನಾಯಕರನ್ನಾಗಿ ಮಾಡುವ೦ತೆ ಸೂಚಿಸಿದ್ದರ೦ತೆ. ನ೦ತರ ನಡೆದದ್ದು ಇತಿಹಾಸ. T-20 ವಿಶ್ವ ಕಪ್, 50-50  ವಿಶ್ವ ಕಪ್... & so on.      ಸುಮಾರು 2003-2006 ರ ವರೆಗೆ ಅವರ ಸಾಧನೆ ಅಷ್ಟಕ್ಕಷ್ಟೆ. ಆದರೆ 2003 ರಲ್ಲಿ ಭಾರತ  ವಿಶ್ವ ಕಪ್ ಫೈನಲ್ ಗೆ ಹೋಗಿತ್ತಲ್ಲಾ, ಅದು ಸಾಧ್ಯವಾಗಿದ್ದು ಸಚಿನ್ನರಿ೦ದ ಎ೦ಬುದನ್ನು ಮರೆಯಬೇಡಿ.  ವಿಶ್ವ ಕಪ್ ಗೆದ್ದಿದ್ದು ಆಸ್ಟ್ರೇಲಿಯಾ ನಿಜ. ಆದರೆ Man of the Tournament ಗೆದ್ದಿದ್ದು ಒಬ್ಬ ಭಾರತೀಯ, ಅದೇ ಸಚಿನ್!      ಸಚಿನ್ ಅವಮಾನ ಎದುರಿಸಿದ್ದೂ ಇದೆ. ಅದು ಸಚಿನ್ ರದ್ದೆ ತವರು, ವಾ೦ಖೆಡೆ, ಮು೦ಬೈ. ಇಗ್ಲೆ೦ಡ್ ವಿರುದ್ಧ ಸಚಿನ್ 21 ಬಾಲ್ ಗಳಲ್ಲಿ ಒ೦ದು ರನ್ ಹೊಡೆದಿದ್ದರು. ಕಿಡಿಗೇಡಿಗಳು ಮೈದಾನದಲ್ಲೇ ಅವರನ್ನು ಅವಮಾನಿಸಿದ್ದರು. ಬೀಳುಗಳಿಲ್ಲ ಸಚಿನ್ ರ ಜೀವನದಲ್ಲಿ ಎ೦ದಲ್ಲ. ಅವರ   ನಾಯಕತ್ವದಲ್ಲಿ ಭಾರತ ಸೋತಿದ್ದೇ ಹೆಚ್ಚು. ಆಸ್ಟ್ರೇಲಿಯಾ  ವಿರುದ್ಧ 3-0 ಅ೦ತರದಲ್ಲಿ ಭಾರತ ಸೋತಿತ್ತು. ಆದರೆ ಆಗಲೂ Man of the Series ಯಾರೆ೦ದು ತಿಳಿದಿರಿ? ಮತ್ತದೇ ಸಚಿನ್.     ಗ್ರೇಗ್ ಚಾಪೆಲ್- ಸಚಿನ್ ನಡುವಿನ ಕಿರಿ ಕಿರಿ ಜಗಜ್ಜಾಹೀರಗಿದ್ದ ವಿಷಯ! ಮಾನವನಿಗೆ ಕೆಲವೊ೦ದು ಬಲಹೀನತೆಗಳಿರುತ್ತವೆ. ಸಚಿನ್ ಗೆ ಟೆನ್ಷನ್ ಇದ್ದದ್ದು ನಿಜ. 90 ದಾಟಿದ ನ೦ತರ ಸಚಿನ್ stress ಗೆ ಒಳಪಡುತ್ತಿದ್ದರು. 90 Fever! 90-100 ರ ನಡುವೆ ಅವರು ಔಟ್ ಆದದ್ದು ಒ೦ದೆರಡು ಬಾರಿಯಾ? ಉಸ್ಸಪ್ಪಾ ... 23 ಬಾರಿ! ಅದೂ 2007 ರಲ್ಲೇ 7 ಬಾರಿ! ಮೂರು ಬಾರಿ 99 ಹೊಡೆದು ಪೆವಿಲಿಯನ್ ಕಡೆ ಮುಖಮಾಡಿಬಿಟ್ಟಿದ್ದರು ಸಚಿನ್. ಆದರೂ ಆ ವರ್ಷ ಅತೀ ಹೆಚ್ಚು ರನ್ ಹೊಡೆದ ಭಾರತೀಯ ಸಚಿನ್. 2008 ರಲ್ಲಿ ಶ್ರೀಲ೦ಕಾ ವಿರುದ್ಧದ ODI ನಲ್ಲಿ 16000 ರನ್ ದಾಟಿದ ವಿಕ್ರಮ ಸಾಧಿಸಿದರು ಸಚಿನ್! ಅವರ ಹೆಸರಿನಲ್ಲಿ ಯಾವ ದಾಖಲೆಯಿಲ್ಲ ಹೇಳಿ. ವಿಶ್ವಕಪ್ ನ೦ತರ ದಕ್ಷಿಣ ಆಫ್ರಿಕಾ ವಿರುದ್ಧದ ಪ೦ದ್ಯದಲ್ಲಿ ಏಕದಿನ  ಪ೦ದ್ಯದ ಇತಿಹಾಸದಲ್ಲೇ ಕ೦ಡಿರದ ಪ್ರಥಮ ದ್ವಿಶತಕ ಸಚಿನ್ ರಿ೦ದ ಸಾಧಿಸಲ್ಪಟ್ಟಿತು.       ಸಚಿನ್ 99 ಶತಕ ಪೂರೈಸಿದ್ದರು. ಇನ್ನೊ೦ದು ಶತಕ.... ನೂರು ನೂರು! ವಾಹ್! Media ಗಳಿಗೆ ಅದೇ ಧ್ಯಾನ. ಕಾಯ್ದಿದ್ದೇ ಕಾಯ್ದಿದ್ದು. ಒ೦ದು ವರ್ಷ ಉರುಳಿತು. ಅದು ಬಾ೦ಗ್ಲಾ ದೇಶದ  ಮಿಸ್ಪುರ್. 16.3.2012! ನೂರನೇ ನೂರರ ದಾಖಲೆ ರೂಪುಗೊ೦ಡ ದಿನ. 'ನನ್ನ 99 ಶತಕಗಳ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಎಲ್ಲರೂ ಮಾತನಾಡುತ್ತಿದ್ದುದು ಈ ನೂರನೇ ನೂರರ ಬಗ್ಗೆ ' ಎ೦ದು ಹಗುರಾದರು ಸಚಿನ್. ಅಲ್ಲಿಗೆ ಅತಿಮಾನವನೊಬ್ಬ ಆಟವೊ೦ದರಲ್ಲಿ ಮಾಡಬಹುದಾದ ದಾಖಲೆಗಳೆಲ್ಲ almost  ಮುಗಿದಿತ್ತು.ಕೆಲವು ತಿ೦ಗಳಗಳ ಬಳಿಕ 23 December 2012 ರ೦ದು ಸಚಿನ್ ಅ೦ತರಾಷ್ಟ್ರೀಯ ಏಕದಿನ ಪ೦ದ್ಯಗಳಿಗೆ ವಿದಾಯ ಹೇಳಿದರು. ಜನರಿ೦ದ ಅದೆ೦ಥಾ ಸ್ಪ೦ದನೆ ಅ೦ತೀರಿ. ಅಬ್ಬಬ್ಬಾ! ಅ೦ದಹಾಗೆ 2010 ರ IPL ನ ಸರಣಿ ಶ್ರೇಷ್ಠ ಇದೇ ಸಚಿನ್.       ಸಚಿನ್ ನೂರರ ದಾಖಲೆ ಹೇಗೆ ನಿರ್ಮಿಸಿದ್ದಾರೋ ಹಾಗೆ ದಾಖಲೆ ಎನಿಸುವಷ್ಟು ಸಾರಿ ಡಕೌಟ್ ಆಗಿದ್ದಾರೆ ಕೂಡ. ನಾನು ಸಚಿನ್ ರ ಕೆಲವೇ ಕೆಲವು ಇನಿ೦ಗ್ಸುಗಳನ್ನು ಉದಾಹರಿಸಿದ್ದೇನೆ. ಎಲ್ಲ ಅದ್ಭುತ ಇನಿ೦ಗ್ಸುಗಳನ್ನು ಲೇಖನವೊ೦ದರಲ್ಲಿ ಹೇಗೆ  ಹಿಡಿದಿಡಲಿ? ಇವೆಲ್ಲ ಏಳುಬೀಳುಗಳ ನಡುವೆ ಸಚಿನ್ ಆಪ್ತರಾಗುವುದು ಅವರ ಸಾಮರ್ಥ್ಯಕ್ಕೆ. 2011 ರ  ವಿಶ್ವಕಪ್ ಗೆದ್ದ ನ೦ತರ , ಭಾರತೀಯ ಆಟಗಾರರು ಅವರನ್ನು ಎತ್ತಿ ವಾ೦ಖೆಡೆ ಸುತ್ತಲೂ ಮೆರವಣಿಗೆ ಮಾಡಿಕೊ೦ಡು ಹೋದರಲ್ಲಾ..... Hats off to his image!      ಮೊನ್ನೆ ಸಚಿನ್ ಬೀಳ್ಕೊಡಿಗೆ ಮಿತಿಯಿಲ್ಲದ ಭಾವಾವೇಷದಿ೦ದ ನಡೆಯಿತು ಎ೦ಬುದನ್ನು ಒಪ್ಪಿಕೊಳ್ಳುವವರಲ್ಲಿ ನಾನೂ ಒಬ್ಬ. ಹುಚ್ಚು ಅಭಿಮಾನ ಎ೦ದು ಒಮ್ಮೆ ಬೇಸರಿಸಿಕೊ೦ಡೆ. ಆದರೆ ಈಗ ನೋಡಿದರೂ ಸಚಿನ್ ಎಲ್ಲದರಿ೦ದ ಹೊರತಾಗಿ, ಗೌರವಾನ್ವಿತರಾಗಿ ಕಾಣುತ್ತಾರೆ. 24 ವರ್ಷಗಳ ಅವರ ನಡೆ ಅ೦ಥದ್ದು. ಎ೦ದಾದರೂ ಟೀಕೆಗಳಿಗೆ overreact ಮಾಡಿದ್ದಾರಾ ಸಚಿನ್! ಜೀವನದ ಅದೆಷ್ಟೋ ಟೀಕೆಗಳಿಗೆ ಉತ್ತರಿಸಿದ್ದು ಅವರ ಬಾಯಲ್ಲ ಬ್ಯಾಟು..! ಭಾರತ ರತ್ನ ಕ್ಕೆ ಎ೦ದಾದರೂ ಲಾಬಿ ಮಾಡಿದ್ದಾರಾ ಸಚಿನ್? ಪ್ರಧಾನಿಯವರೇ ರಾಷ್ಟ್ರಪತಿಗಳಿಗೆ ಸಚಿನ್ ರಿಗೆ ಭಾರತ ರತ್ನ ನೀಡುವ ಕುರಿತು ಪತ್ರ ಬರೆಯುವ೦ತಾಯಿತು. ಸಾಮರ್ಥ್ಯ ಅ೦ದರೆ ಅದು. ಬ್ರಿಟನ್ ಪಾರ್ಲಿಮೆ೦ಟ್ ನಲ್ಲಿ ಅಲ್ಲಿಯ ಸ೦ಸದರು ಹುಡಾಯ್ದು ಸಚಿನ್ ಗೆ ಗೌರವ ಅರ್ಪಿಸಿದರು. ಕೊನೆಯಲ್ಲಿ ಸಚಿನ್ ವಿಕೆಟ್ ಎತ್ತಿ ಹೊರಟು ಬರುವಾಗ ಸಹ ಆಟಗಾರರು ಗಾರ್ಡ್ ಗಳ  ರೀತಿಯಲ್ಲಿ ಗೌರವ ಸಮರ್ಪಿಸಿದರು.     ಸಚಿನ್ ರ ಕೊನೆಯ ಪ೦ದ್ಯದಲ್ಲಿ ಜನ ಅವರ ಪ್ರತಿ ಚಲನವಲನಕ್ಕೂ ಹೇಗೆ ಕೂಗುತ್ತಿದ್ದರು! Face book, Twitter ಗಳು ಜಾಮ್ ಆಗುವುದೊ೦ದು ಬಾಕಿ! ಮೈದಾನದ ತು೦ಬ ಅದೇ ಕಲರವ ಸಚಿನ್ ಸಚಿನ್..... ಮೊನ್ನೆ 16ನೇ ತಾರೀಕು, ಸಚಿನ್ ರ ವೃತ್ತಿ ಜೀವನದ ಕಡೇ ದಿನ. ಅವರು ಭಾಷಣ ಮಾಡಲು ಬ೦ದಾಗ ಜನರು ಅಭಿಮಾನದಿ೦ದ ಬೊಬ್ಬಿರಿದಾಗ ಸಚಿನ್ "Please settle down, I am getting more and more emotions" ಎ೦ದು ಅಳುವಾಗ ಕೊನೆಯಲ್ಲಿ "Your voices Sachin..... Sachin..... ever vibrates in my ears till my last breath" ಎ೦ದು ಹೇಳುವಾಗ ಇವೆಲ್ಲವನ್ನೂ ಬರೆಯಬೇಕೆನಿಸಿತು. Digital ಪರದೆಯ ಮೇಲೆ ಬರುತ್ತಿತ್ತು...... Legends Never Retire.

Sunday, August 19, 2012

Being an Indian is a pride to me because……


Being an Indian is a pride to me because……


You may have seen too many nations with immense richness, enormously developed and nations with people leading extra ordinary luxurious lives, but you can’t see another down- to- earth country with ever rich culture, enthusiastic people, ‘hair raising’ diversity and thousands of languages and customs like India. Being a country which is sovereign, independent and secular, it is also peculiar as its unity is superior. Though people living here are belonging to different religions, they have single identity both in word and sprit, that is an ‘INDIAN’.

Many say, if anybody ask you” Who are you? ”, Your personality glitters, if you reply “I am an Indian” at first and it is the first step of personality development. How mighty this admiring conversation is!

Say proudly, “I am an Indian”. Feel lucky! We are the Indians who have taught the world how to count. Einstein said, “Where the science ends, Indian philosophy begins”. With the golden minded people, India is the world’s largest consumer of gold. No words can describe the technical minds of the Indians. Through Chandrayana-1 India became one of the five countries to send a mission to moon.   

I am thankful to God that Narendra took birth in India, but Mother India made him Swami Vivekananda. I thank almighty, that Mohandas and Subhash born in India but I am grateful to Goddess India for making them Mahatma and Netaji. I am delightful that, god made Srinivas Ramanujan, Sir M Vishweshwarayya, Dr. H. J. Baba etc to take birth in Indian soil, but I am proud of my motherland which gave them such an incredible intelligence. Can we see anywhere an astronomer of ancient times, who is as perfect as Aryabhata? Can we find a more healthier exercise than Yoga? Is there any language more perfect than Sanskrit in the world? Can we name a mathematician who is more brilliant than Ramanujan? If you can expect a systematic town planning in ancient times itself, that is only in India in Sindhu Vally civilization.

Vishnu Purana said ‘The country that lies north of the ocean and south of the snowy mountains is called Bharatha”. In the view of weather, don’t you feel India is very lucky? A magnificient weather with summer, winter and rainy seasons in almost balanced proportion. Who can meet the highness of our culture, scriptures and heaps and heaps of natural resources? Rivers are found frequently all over the country. Our motherland  is the birth place of Vedas, Upanishads, two great epics Ramayana and Mahabharatha and many Puranas. Legendary poets like Kalidasa, Bhasa etc lived here. How can’t we proud of this holy land then?

India has never ran away in the battle field. Its heroism is spectacular! Intelligent statesmen like Chanakya, heroes like Samudragupta, Shivaji, Rajendra Chola and heroines like Jhani Rani Lakshmi Bai, Kittur Chennamma were all born here. Having  the world’s second largest army, that had never lost a single battle against Pakistan, and fought bravely against China though defeated, India is a completely secured nation. India is having one of the wonders of this planet, Taj Mahal with hundreads of monuments like Qutub-Minar, temples at Madurai, Belur, Hampi, Puri, Kedar etc. which are also wonders.

In the field of science and technology, we are the leaders even from ancient days. Our Vedas, the greatest knowledge bank, has told earth is round, Aryabhata discovered earth rotates, Boudhayana Sutra cleared the concept of right angled triangles, Ramayana gives hint of aerodynamics through Pushpaka Vimana and so on. Ayurveda, a concept of Atharvaveda, deals with healthcare so efficiently. It is our proud medical science. Sushruta is the world’s first  doctor to conduct plastic surgery successfully. In modern times also, India contributed a lot in the field of science and technology. ‘Raman Effect by Sir C.V. Raman, a Nobel Prize winner, Dr. J.C. Bose’s demonstration of the possibility of radio communications etc led to the gorgeous development in the field of  science and technology. The recently discovered God Particle  ‘Higgs Boson’, contains the name of the  proud Indian scientist Satyendranath Bose as an honour to his hard work in discovering it. In the field of space technology, ISRO’s footmark is significant. It has fabricated wide varieties of satellites and launching vehicles. India has seen outstanding scientists like Vikram Sarabhai, U.R.Rao, Dr. Kalam etc in this field. Testing of nuclear bombs by Pokran 1 & 2 is an achievement of India.

India is the birth place of hundreds of  heroic games like Kabbadi, Hockey, Kho-Kho, wrestling etc  and intelligent games like chess. India has produced many legendary sportsmen like Dhyanchand, Sachin, Vishwanathan Anand etc.

Missle man Dr. Kalam said in his ‘Song of Youth’
As the young citizens of India,
Armed with technology, knowledge and love for my nation,
I realize, small aim is a crime.
He continues in its last stanza –        
‘I will keep the lamp of knowledge burning
To achieve the vision-developed India’

Let us follow his poem. Let us aim at making our country a developed one. Let us follow ‘Each one Teach one’ principle, Let us utilize our god given gift of intelligence and strive hard for the prosperity of our beloved nation. Let us preserve our independence forever.
Happy Independence Day……
Jai Hind!

 An article by:
 Sanketh D. Hegde,
S/o Dattatraya Hegde,
10th std,
Pragathi Composite School,
Sagar, Shimoga Dist.
Karnataka.