ಅಹಿಂಸೆಯ ಪ್ರತಿಪಾದಕರಿಗೆ ಸಂಪೂರ್ಣ ಗೌರವದಿಂದ ನಾನೊಂದು ಮೂಲಭೂತ ಪ್ರಶ್ನೆ ಕೇಳಬಯಸುತ್ತೇನೆ. ನಿಮಗ್ಯಾಕೆ ಹಿಂಸೆ ಮತ್ತು ಸ್ವರಕ್ಷಣೆಯ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ? ಎಂದು. ಹಿಂಸೆ ಅಪ್ರಚೋದಕವಾದ ಕ್ರೌರ್ಯ. ಸ್ವರಕ್ಷಣೆ ಹಿಂಸೆಯಲ್ಲ, ಅದೊಂದು ಅನಿವಾರ್ಯದ ಪ್ರತಿಕ್ರಿಯೆ. ಶಾರ್ಕ್ ಮೀನೊಂದು ಸಣ್ಣ ಮೀನುಗಳನ್ನು ತಿನ್ನಲು ಬಂದರೆ, ಸಣ್ಣ ಮೀನುಗಳು ಸಾವಿರಾರು ಸಂಖ್ಯೆಯಲ್ಲಿ ಒಟ್ಟಾಗಿ ಶಾರ್ಕ್ ನ ಮೇಲೇ ದಾಳಿ ಮಾಡುತ್ತವೆ. ಅದು ಹಿಂಸೆಯೇನು? ಅಪರಿಚಿತನೊಬ್ಬ ಬೆಕ್ಕುಮರಿಯೊಂದನ್ನು ಬಲವಂತವಾಗಿ ಎತ್ತಿಕೊಳ್ಳಹೋದರೆ ಪರಚಿ ಹಾಕುತ್ತೆ. ಸುಂದರವಾಗಿ ಕಟ್ಟಿಕೊಂಡ ಜೆನೂಗೂಡಿಗೋ, ಕಷ್ಟಪಟ್ಟು ಕಟ್ಟಿಕೊಂಡ ಇರುವೆ ಗೂಡಿಗೋ ಹೋಗಿ ಒಂದು ಗುದ್ದು ಕೊಡಿ ನೋಡೋಣ. ಸಾಯುವಂತೆ ಕಚ್ಚಿ ಕಳಿಸುತ್ತವೆ. ಇವೆಲ್ಲ ನಿಮಗೆ ಹಿಂಸೆಯಂತೆ ಕಾಣುವುದೇನು? "Struggle For Existence" ಎಂದು ಡಾರ್ವಿನ್ ಹೇಳಿದ್ದು ಇಂಥವಕ್ಕೇ!
ಸ್ವಾತಂತ್ರ್ಯ ಚಳುವಳಿಯಲ್ಲಿ ಮಂಗಲ್ ಪಾಂಡೆಯಿಂದ ಹಿಡಿದು ನೇತಾಜಿಯವರೆಗೂ ಮಾಡಿದ್ದು ಅದನ್ನೇ, the Struggle For Existence. ನೀವವರನ್ನು ಹಾದಿ ತಪ್ಪಿದ ದೇಶಭಕ್ತರು ಅಂತ ಅನಾಯಾಸವಾಗಿ ಅತ್ಲಾಗಿಡಲು ಬರುವುದಿಲ್ಲ ಸ್ವಾಮಿ. An eye for an eye makes the whole world blind ಅನ್ನುವುದು ಸತ್ಯ. ಆದರೆ It is better to be blind in independence than being sighted in captivity. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಿರಿ ಎಂಬುದೂ ಅಷ್ಟೇ ಸತ್ಯ. ಒಬ್ಬೊಬ್ಬರು ಒಂದೊಂದನ್ನ ನಂಬಿದರು ಬಿಡಿ. ನಿಮಗೇನು ಅಲವರಿಕೆ? ಅಷ್ಟಕ್ಕೂ ಮುಳ್ಳನ್ನು ಮುಳ್ಳಿನಿಂದ ತೆಗೆಯುವುದೇ ಹೆಚ್ಚು ನೈಸರ್ಗಿಕ. ಪ್ರಕೃತಿ ಜೀವಿಗಳಿಗೆ ಹೇಳಿಕೊಟ್ಟಿದ್ದು ಅದನ್ನೇ, ಅಹಿಂಸಾಮಾರ್ಗವನ್ನಲ್ಲ. ಅಹಿಂಸೆಯನ್ನು ಸ್ವಾತಂತ್ರ್ಯದ ಮುನ್ನ ಉಗ್ರವಾಗಿ ಪ್ರತಿಪಾದಿಸುತ್ತಿದ್ದ ಕಾಂಗ್ರೆಸ್, ಯಾಕೆ ಸ್ವಾತಂತ್ರ್ಯದ ನಂತರ ಸೈನ್ಯವನ್ನು ಅಸ್ತಿತ್ವದಲ್ಲಿಟ್ಟಿರಿ. ಸ್ವಾತಂತ್ರ್ಯದ ಮರುವರ್ಷವೇ ಬಂದಿತ್ತಲ್ಲ ಕಾಲು ಕೆರೆದುಕೊಂಡು ಯುದ್ಧಕ್ಕೆ ಪಾಕಿಸ್ತಾನ? ಆಗ ಉಪವಾಸ ಕೂರಬೇಕಿತ್ತು ಹೋಗಿ ಗಡಿಯಲ್ಲಿ. ಅಹಿಂಸೆಯ ಬಗ್ಗೆ ದಿನಗಟ್ಟಲೆ ಭಾಷಣ ಕೊರೆಯುವ ನೀವು, ಆಗ ಯೋಧರನ್ನೇಕೆ ಕಳಿಸಿದಿರಿ? ನಿಮ್ಮ ಅಹಿಂಸೆ ಎಲ್ಲಾ ಕಾಲದಲ್ಲೂ ಕೆಲಸಕ್ಕೆ ಬರುವುದಿಲ್ಲ ಸ್ವಾಮಿ. ಹಲ್ಲು ಮುರಿದ ಹಾವನ್ನು ಪೋಕರಿಯೂ ನೇತಾಡಿಸಿಕೊಂಡು ಓಡಾಡುತ್ತಾನೆ. ಗಾಂಧೀಜಿಯವರನ್ನು ಹೃದಯದಲ್ಲಿಟ್ಟು ಪೂಜಿಸುವವನು ನಾನು. ಅವರ ಬಗ್ಗೆ ಇಲ್ಲಸಲ್ಲದ ಮಾತುಗಳನಾಡುವ ಸಂಘಿಗಳ ವಿರುದ್ಧ ಉಗ್ರಪ್ರತಿಕ್ರಿಯೆಗಳನ್ನು ಬರೆದವನು ನಾನು. ಹಂಗಂತ ಕ್ರಾಂತಿಕಾರಿಗಳನ್ನು ದ್ವೇಷಿಸಬೇಕೇನು?
ಪಾಪ, ಕಾಂಗ್ರೆಸ್ ಮತ್ತು ಎಡಪಂಥೀಯರಿಗೆ ಸಾವರ್ಕರ್ ಅಂದರೆ ಹಳೆ ಜನ್ಮದ ದ್ವೇಷ. ಬ್ರಿಟಿಷರನ್ನು ಎಷ್ಟು ದ್ವೇಷಿಸಿದ್ದರೋ, ಅದಕ್ಕಿಂದ ಒಂದು ಹಿಡಿ ಹೆಚ್ಚಾಗಿ ಸಾವರ್ಕರ್ ರನ್ನು ದ್ವೇಷಿಸುತ್ತಾ ಬಂದಿದ್ದಾರೆ. ಸಾವರ್ಕರ್ ರನ್ನು ಗಾಂಧೀ ಹಂತಕ ಎಂಬಂತೆ ಬಿಂಬಿಸಲಾಯಿತು. ಸಾವರ್ಕರ್ ಗೆ ಸಾಧ್ಯವಾದಷ್ಟು ತೊಂದರೆಯಾಗುವಂತೆ ನೆಹರು ನೋಡಿಕೊಂಡರು. ಅವರ ಮನೆಯ ಮೇಲೆ ಕಲ್ಲಿನ ದಾಳಿಯಾಯಿತು. ಆದ ಗಾಯಕ್ಕೆ, ಅವರ ತಮ್ಮ ಲೋಕ ತ್ಯಜಿಸಬೇಕಾಯಿತು. ಕೊನೆಗೆ ಸಾವರ್ಕರ್ ವಿಧಿವಶರಾದಾಗ ಒಂದು ಶವಪೆಟ್ಟಿಗೆ ಸಿಗಲೂ ಕಷ್ಟವಾಗುವಂತೆ ನೋಡಿಕೊಳ್ಳಲಾಯಿತು. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ಕೇಂದ್ರ ಮಂತ್ರಿ ಮಣಿಶಂಕರ್ ಅಯ್ಯರ್ ಅಂಡಮಾನ್ ಗೆ ಹೋದಾಗ, ಅಲ್ಲಿ ಸಾವರ್ಕರ್ ರನ್ನು ದಶಕದ ಕಾಲ ಇಟ್ಟಿದ್ದ ಸೆಲ್ಲುಲಾರ್ ಜೈಲಿಗೆ ಭೇಟಿಕೊಟ್ಟು ನಮನ ಅರ್ಪಿಸಲು ನಿರಾಕರಿಸಿದರು. ಇವರ ನಮನ ಯಾರಿಗೆ ಬೇಕು? ಆದರೆ, ಸಾವರ್ಕರ್ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದರು. ಅಲ್ಲಿದ್ದ ಸಾವರ್ಕರ್ ಹೇಳಿಕೆಯನ್ನು ತೆಗೆದು ಗಾಂಧೀಜಿಯವರ ಹೇಳಿಕೆಯನ್ನು ಸ್ಥಾಪಿಸಲು ಆಜ್ಞಾಪಿಸಿದರು. ಮೊನ್ನೆ INCಯ ಅಧಿಕೃತ facebook ಪುಟ, "ಯಾವಾಗ ಚಂದ್ರಶೇಖರ್ ಅಜಾದ್ ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದರೋ, ಆಗ ಸಾವರ್ಕರ್ ಬ್ರಿಟೀಷರ ಬಳಿ ಕ್ಷಮೆಗೆ ಅಂಗಲಾಚುತ್ತಿದ್ದರು. ಅಜಾದ್ ಅಸಲಿ,ಸಾವರ್ಕರ್ ನಕಲಿ" ಎಂಬ ಹಾಸ್ಯಾಸ್ಪದ ಪೋಸ್ಟ್ ಒಂದನ್ನು ಪ್ರಕಟಿಸಿತು.
ರೀ ಶತದಡ್ಡರೇ, ನೀವು ಈಗ "ಸಾವರ್ಕರ್ ಕ್ಷಮೆ ಕೇಳಬಾರದಿತ್ತು" ಅಂದರೆ ಸಾವರ್ಕರ್ ಜೈಲಿಗೆ ಸೇರುವ ಮುನ್ನ ಮಾಡಿದ ಕೃತ್ಯಗಳು ಸರಿಯಾಗಿದ್ದವು ಅಂತ ನೀವು ಒಪ್ಪಿಕೊಂಡಂತಾಗುತ್ತೆ. ಅಂದರೆ ಅವರು ಮಾಡಿದ, ಮಾಡಿಸಿದ ಬ್ರಿಟೀಷ್ ದುರುಳರ ಹತ್ಯೆ, ಸಿಡಿಸಿದ ಬಾಂಬುಗಳು, ಎಬ್ಬಿಸಿದ ಗಲಾಟೆಗಳು ಇವೆಲ್ಲ ಸರಿ ಅಂತ ಒಪ್ಪಿಕೊಂಡತಾಗುತ್ತದೆ. ಅಷ್ಟಕ್ಕೂ ಅಹಿಂಸೆಯ ಪರಮ ಪ್ರತಿಪಾದಕರಲ್ಲವೇ ನೀವು? ಸಾವರ್ಕರ್ "ನನ್ನದು ತಪ್ಪು ದಾರಿ ಎಂಬುದು ನನಗೆ ಅರಿವಾಗಿದೆ. ನಾನು ಬದಲಾಗಿದ್ದೇನೆ. ನನ್ನ ಬಿಟ್ಟುಬಿಡಿ. ಇದರಿಂದ ಕ್ರಾಂತಿ ಅನ್ನುವ ತಪ್ಪುದಾರಿಗಿಳಿದಿರುವ ಯುವಕರೂ ಅದರಿಂದ ವಿಮುಖರಾಗುತ್ತಾರೆ" ಅಂತ ಬ್ರಿಟೀಷರಿಗೆ ಬರೆದ ಪತ್ರವನ್ನು ಹಿಡಕೊಂಡು ಯಾಕೆ ಅವರನ್ನು ಬಯ್ಯುತ್ತೀರಿ?
ಸಾವರ್ಕರ್ ಆ ರೀತಿಯ ಪತ್ರಗಳನ್ನು ಬರೆದದ್ದು ಒಂದು strategic move. ರಾಹುಲ್ ಗಾಂಧಿಯಂಥ ಮೇಧಾವಿಗಳನ್ನು ನಾಯಕನನ್ನಾಗಿಟ್ಟುಕೊಂಡಿರುವ ನಿಮ್ಮಿಂದ ಇದನ್ನೆಲ್ಲಾ ಅರ್ಥ ಮಾಡಿಕೊಳ್ಳುವಂತೆ ನಿರೀಕ್ಷಿಸುವುದು ನಮ್ಮ ಮೂರ್ಖತನವಾದೀತು. "ಕ್ರಾಂತಿಯ ಹಾದಿ ಹಿಡಿದು ತಪ್ಪುಮಾಡಿಬಿಟ್ಟೆ" ಅಂತ ಅಂಗಲಾಚುವವರು First War Of Indian Independence ಬಗ್ಗೆ ಅದ್ಭುತ ಪುಸ್ತಕ ಬರೆಯುತ್ತಾರಾ? ಸಾವರ್ಕರ್ ರನ್ನು ಇಟ್ಟಿದ್ದ ಸೆಲ್ಯುಲಾರ್ ಜೈಲು ಹೇಗಿತ್ತು ಗೊತ್ತೇನು? ಅವರಿಗೆ ವಿಧಿಸಿದ್ದ ಕಾಲಾಪಾನಿ ಶಿಕ್ಷೆಯ ತೀವ್ರತೆ ಎಷ್ಟು ಅರಿವುಂಟೇನು? ನಿಮ್ಮಲ್ಲಿ ಕೆಲವರು ಸೋಫಾಗಳಿದ್ದ ಐಷಾರಾಮಿ ಜೈಲುಗಳಲ್ಲಿ ವಾಸ ಮಾಡಿದ್ದರಲ್ಲ, ಸ್ವಾತಂತ್ರ್ಯ ಬಂದ ನಂತರ ತಾನೇ ದೊಡ್ಡ ಸ್ವಾತಂತ್ರ್ಯಹೋರಾಟ-ತ್ಯಾಗ ಮಾಡಿದವರಂತೆ ಬಂದು ಪ್ರಧಾನಿಯಾಗಿಬಿಟ್ಟರಲ್ಲ, ಅಂಥವರನ್ನೇನಾದರೂ ಅಲ್ಲಿಟ್ಟಿದ್ದರೆ, ಕ್ಷಮಾಪಣೆ ಪತ್ರಬರೆಯುವುದಿರಲಿ, ಎರಡೇ ದಿನಕ್ಕೆ ಬಾಯಿಬಡಿದುಕೊಂಡು ಬ್ರಿಟೀಷರ ಕಾಲಿಗೆ ಬಿದ್ದುಬಿಡುತ್ತಿದ್ದರು. ಇಡೀ ದಿನದಲ್ಲಿ ಎರಡೇ ಲೋಟ ನೀರು ಕುಡಿದುಕೊಂಡು ವಿಶ್ರಾಂತಿ ಇಲ್ಲದೇ ಎಣ್ಣೆಯ ಗಾಣ ತಿರುಗಿಸುವುದು ಅಂದರೆ ಇಟಲಿ ಮಹಿಳೆಯ ಮುಂದೆ ಬಾಲಮಡಚಿಕೊಂಡು ಕೂತಷ್ಟು ಸುಲಭ ಅಂದುಕೊಂಡಿರಾ?
ಸಾವರ್ಕರ್ ಮೇಲಿನ ದ್ವೇಷಕ್ಕೆ ಕಾಂಗ್ರೆಸ್ ಗೆ ಕೆಲವು ಕಾರಣಗಳಿರಬಹುದು. ಸಾವರ್ಕರ್ ಹಿಂದುತ್ವವನ್ನು ಪಟ್ಟು ಹಿಡಿದು ಪ್ರತಿಪಾದಿಸಿದ್ದರು. ಕಾಂಗ್ರೆಸ್ ವಿರುದ್ಧವಾಗಿ ಅಭಿನವ ಭಾರತವನ್ನು ಕಟ್ಟಿ ಚುನಾವಣೆಯಲ್ಲಿ ಸ್ಫರ್ಧಿಸಿದ್ದರು. ಕೆಲವು ಕಡೆ ಜಿನ್ನಾನ ಮುಸ್ಲಿಂ ಲೀಗ್ ಜೊತೆ ಸೇರಿ ಮೈತ್ರಿ ಸರ್ಕಾರವನ್ನೂ ರಚಿಸಿದ್ದರು. 1942ರ Quit India ವಿಫಲವಾಗುವಂತೆ ಮಾಡಲು ಅಭಿನವ ಭಾರತ ಇನ್ನಿಲ್ಲದಂತೆ ಪ್ರಯತ್ನಿಸಿತ್ತು. ಎರಡನೇ ವಿಶ್ವಯುದ್ಧದಲ್ಲಿ ಭಾರತೀಯರನ್ನು ಸೌಜನ್ಯಕ್ಕೂ ಒಂದು ಮಾತೂ ಕೇಳದೆ ಭಾರತೀಯ ಸೈನ್ಯವನ್ನು ಬ್ರಿಟೀಷರು ಭಾಗಿಯಾಗಿಸಿಕೊಂಡುಬಿಟ್ಟಿದ್ದರು. ಇದನ್ನು ಗಾಂಧೀಜಿಯ ನೇತೃತ್ವದಲ್ಲಿ Indian National Congress ತೀವ್ರವಾಗಿ ವಿರೋಧಿಸಿತ್ತು. ಆದರೆ ಸಾವರ್ಕರ್ ಅವರ ನಿಲುವು ಸಂಪೂರ್ಣ ವಿರುದ್ಧವಾಗಿತ್ತು. ಹಿಂದೂಗಳು ಸೈನ್ಯಕ್ಕೆ ಹೆಚ್ಚೆಚ್ಚು ಸೇರಬೇಕು. ಯುದ್ಧ ಕಲೆಯಲ್ಲಿ ನಿಪುಣರಾಗಬೇಕು. ಸ್ವಾತಂತ್ರ್ಯಾನಂತರ ಬ್ರಿಟೀಷರು ಸೇನೆಯಿಂದ ಹೋದರೆ ಸ್ವಂತ ಶಕ್ತಿಯಲ್ಲೇ ಭಾರತೀಯ ಸೈನ್ಯ ಯುದ್ಧ ಸಾಮರ್ಥ್ಯ ಹೊಂದಿರಬೇಕು ಎಂಬುದು ಸಾವರ್ಕರ್ ಆಲೋಚನೆ. ಕೊನೆಗೆ ಅಖಂಡ ಹಿಂದೂಸ್ತಾನವನ್ನು ಉಸಿರಲ್ಲೆ ಬೆರೆಸಿಕೊಂಡಿದ್ದ ಸಾವರ್ಕರ್, ಭಾರತದ ವಿಭಜನೆಯನ್ನು ಶತಾಯುಗತಾಯು ವಿರೋಧಿಸಿದ್ದರು. ಇವೆಲ್ಲ ಕಾಂಗ್ರೆಸ್ ನ ದ್ವೇಷಕ್ಕೆ ಮೂಲ ಕಾರಣಗಳಿರಬಹುದು.
ನನ್ನ ಲೇಖನದಲ್ಲಿ ಸಾವರ್ಕರ್ ಜಿವನಗಾಥೆಯನ್ನು ಮತ್ತೆ ಬರೆಯಲು ಬಯಸುವುದಿಲ್ಲ. ಅದನ್ನು ಈಗಾಗಲೇ ಸಾಕಷ್ಟು ಜನ ಬರೆದಿದ್ದಾರೆ. ಈ ಲೇಖನದ ಉದ್ದೇಶ ಅದಲ್ಲ. ಮೇಲೆ ಹೇಳಿದ ಎಲ್ಲಾ ವಿಷಯದಲ್ಲೂ ಸಾವರ್ಕರ್ ಸರಿ, ಕಾಂಗ್ರೆಸ್ ತಪ್ಪು ಅಂತಲ್ಲ. ಆದರೆ, Savarkar deserves a lot. ಸಾವರ್ಕರ್ ದೇಶಪ್ರೇಮದ ಆಪಾದನೆಗಾಗಿ ಶಾಲೆ, ಕಾಲೇಜು, ಹಾಸ್ಟೆಲ್ ಗಳಿಂದ ಹೊರದಬ್ಬಿಸಿಕೊಂಡವರು. ದೇಶಪ್ರೇಮದಿಂದಾಗಿ ಪ್ರತಿಷ್ಠಿತ ಬ್ಯಾರಿಸ್ಟರ್ ಪದವಿಯನ್ನು ತ್ಯಾಗ ಮಾಡಿದವರು. ಲಂಡನ್ನಿನ India Houseನಲ್ಲಿ ಹಗಲೂ ರಾತ್ರಿ ಕಷ್ಟಪಟ್ಟು ಶತ್ರುವಿನ ನೆಲದಲ್ಲಿ ಸ್ವದೇಶೀಯರನ್ನು ಒಗ್ಗೊಡಿಸಿದವರು. ಲಂಡನ್ನಿನ ಮಣ್ಣಿನಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸ್ಮರಣಾ ಕಾರ್ಯಕ್ರಮ ಮಾಡಿಸಿದವರು. ಭಾರತೀಯರ ಮೇಲೆ ಅಮಾನವೀಯವಾಗಿ ಅನಾಚಾರ ನಡೆಸಿದ್ದ ಆಂಗ್ಲ ಅಧಿಕಾರಿಗಳನ್ನು ಸಂಹರಿಸಿದವರು. ನೇತಾಜಿಯಿಂದ ಹಿಡಿದು ಧಿಂಗ್ರಾನವರೆಗೆ ಹೋರಾಟದ ಸ್ಫೂರ್ತಿ ತುಂಬಿದವರು. ಸಿಂಹಸ್ವಪ್ನವಾದ ಕಾರಣಕ್ಕೆ ಬ್ರಿಟೀಷರಿಂದ 50 ವರ್ಷ ಶಿಕ್ಷೆಗೊಳಗಾದವರು. ದಶಕದ ಕಾಲ ಕಾಲಾಪಾನಿ ಶಿಕ್ಷೆ ಅನುಭವಿಸಿದವರು. ಕೇಳಲೇ ಭಯವಾಗುವ ಅತಿರೇಕದ ಶಿಕ್ಷೆಗಳನ್ನು ನಮಗಾಗಿ ಅನುಭವಿಸಿದವರು. ಹರಿದುಹಂಚಿ ಹೋಗಿದ್ದ ಭಾರತೀಯರನ್ನು ಹಿಂದುತ್ವದ ಅಡಿಯಲ್ಲಿ ಒಂದುಮಾಡಲು ಶ್ರಮಿಸಿದವರು. ಗಾಂಧೀಹತ್ಯೆಯಲ್ಲಿ ಕಳಂಕರಹಿತರಾಗಿ ಹೊರಬಂದರೂ, ಅವಮಾನಿತವಾದವರು. ದೇಶಕ್ಕಾಗಿ ಎಲ್ಲ ಕೊಟ್ಟರೂ, ಅದೇ ದೇಶದ ಜನ ತೂರಿದ ಕಲ್ಲಿನಿಂದಾಗಿ ತಮ್ಮನನ್ನು ಕಳೆದುಕೊಂಡವರು. ಅರ್ಪಿಸಿಕೊಂಡ ದೇಶದಲ್ಲೇ ಕೊನೆಗೆ ಶವಪೆಟ್ಟಿಗೆ ಸಿಗಲೂ ಕಷ್ಟವಾಗುವಂತ ಪರಿಸ್ಥಿತಿಗೆ ದೂಡಲ್ಪಟ್ಟವರು. ನಮಗಾಗಿ ಜೀವವನ್ನೇ ತೇಯ್ದ ಆ ಜೀವಕ್ಕೊಂದು ಕನಿಷ್ಠ ಮರ್ಯಾದೆಯನ್ನೂ ಕೊಡಲಾರಿರಾ? ಬಾಯಿಬಿಟ್ಟರೆ ಸಾವರ್ಕರ್ ರನ್ನು ತೆಗಳುವುದಕ್ಕೆ, ಕೃತಜ್ಞತೆ ನಿಮ್ಮನ್ನು ಚೂರೂ ಅಡ್ಡಿಪಡಿಸದೇನು?
ಮೊನ್ನೆ ಹೆಸರಾಂತ ಪತ್ರಿಕೆಯೊಂದರಲ್ಲಿ ಬುದ್ಧಿಜೀವಿಯೊಬ್ಬರು ಸಾವರ್ಕರ್ ರನ್ನು ಉಗ್ರಗಾಮಿಯಂತೆ ಬಿಂಬಿಸಿ ಲೇಖನ ಬರೆದಿದ್ದರು. ಬ್ರಿಟೀಷರ ದಾಸ್ಯದಲ್ಲಿ ನಲುಗಿಹೋಗಿದ್ದ ಭಾರತವನ್ನು ಬಿಡಿಸಲು ಹಿರಿಯರು ಅವರಿಗೆ ಸರಿಕಂಡ ಹಾದಿಯಲ್ಲಿ ಪ್ರಯತ್ನಿಸಿದ್ದಾರೆ. ಕೆಲವರು ಕ್ರಾಂತಿ, ಕೆಲವರು ಅಹಿಂಸೆಯ ನಂಬಿ ಜೀವ ತೇಯ್ದಿದ್ದಾರೆ. ಬ್ರಿಟೀಷರು ತೋರಿದ್ದ ಅಮಾನವೀಯ ಕ್ರೌರ್ಯಕ್ಕೆ ಹಿಂಸೆಯ ಪ್ರತಿಕ್ರಿಯೆ ತೋರಿದ ಕ್ರಾಂತಿಕಾರಿಗಳೇನು ಉಗ್ರಗಾಮಿಗಳಲ್ಲ. ಅದೊಂದು ಸ್ವಾಭಾವಿಕ ಪ್ರತಿಕ್ರಿಯೆ. ಅವರೇನು ಸ್ವಂತಕ್ಕಾಗಿ ತಲೆಮರೆಸಿಕೊಂಡು ಓಡಾಡಿ, ಸಿಕ್ಕಿಬಿದ್ದು ಶಿಕ್ಷೆಪಡೆದಿದ್ದಲ್ಲ. ಇವತ್ತು ನಾವನುಭವಿಸುತ್ತಿರುವ ಸ್ವಾತಂತ್ರ್ಯಕ್ಕಾಗಿ ನೇಣಿಗೇರಿದವರು. ಕೃತಜ್ಞತೆಯಿರಲಿ ಆ ತ್ಯಾಗಕ್ಕೆ, ಗುರಿಯಿರಲಿ ಸ್ವಾತಂತ್ರ್ಯದ ಸದುಪಯೋಗಕ್ಕೆ.
ಪೂರ್ವಗ್ರಹವಿಲ್ಲ. ಯಾವುದೋ ಒಂದೇ ಕೋನದಲ್ಲಿ ಅಲೋಚಿಸುವುದಿಲ್ಲ. ಎಡಪಂಥ, ಬಲಪಂಥ ಗೊತ್ತಿಲ್ಲ. ಆರೆಸ್ಸೆಸ್ಸೂ ಅಲ್ಲ, ಕಾಂಗ್ರೆಸ್ಸೂ ಅಲ್ಲ! ಮತ ಸಮರ್ಥರಿಗೆ ಹೋಗಬೇಕು, ಹಿತ ದೇಶಕ್ಕಾಗಬೇಕು, ಅಷ್ಟೆ! ಅದಕ್ಕೆಲ್ಲ ನಮ್ಮ ಬರಹ, ಆಲೋಚನೆ, ಮಾತು ಕಲ್ಮಷವಿಲ್ಲದ್ದಾಗಬೇಕು. 'ಸ್ಫಟಿಕ'ದ ಹಾಗೆ. ಅದಕ್ಕೇ ಈ 'ಸ್ಫಟಿಕ ಮಾತು'! A Blog By Sanketh D Hegde.
Sunday, March 20, 2016
ಸಾವರ್ಕರ್ ಉಗ್ರಗಾಮಿ ಅಂದವರನ್ನು ಇತಿಹಾಸ ಹೇಗೆ ತಾನೆ ಕ್ಷಮಿಸೀತು?
Subscribe to:
Post Comments (Atom)
No comments:
Post a Comment